Surprise Me!

Mandya : ಎಟಿಎಂಗೆ ಕನ್ನ ಹಾಕಿದ್ದ ಆರೋಪಿ ಅರೆಸ್ಟ್..! | Public TV

2022-06-12 0 Dailymotion

ಕಳೆದ ಏಪ್ರಿಲ್ ೧೧ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ಮೈಸೂರು - ಬೆಂಗಳೂರು ರಾಷ್ಟಿçÃಯ ಹೆದ್ದಾರಿಯ ಕೆಎಸ್‌ಆರ್‌ಸಿಬಸ್ ಡಿಪೋ ಪಕ್ಕದಲ್ಲಿರುವ ಎಸ್‌ಬಿಐನ ಎಟಿಎಂನಲ್ಲಿ ಕಳ್ಳತನವಾಗುತ್ತೆ. ಸಿಸಿಟಿವಿ ನಾಶ ಮಾಡಿ ಗ್ಯಾಸ್ ಕಟರ್‌ನಿಂದ ಎಟಿಎಂನಲ್ಲಿದ್ದ ೨೦ಲಕ್ಷದ ೬೨ಸಾವಿರದ ೮೦೦ ರೂಪಾಯಿಯನ್ನು ಗ್ಯಾಂಗ್ ದರೋಡೆ ನಡೆಸಿ ಎಸ್ಕೇಪ್ ಆಗುತ್ತೆ. ಆರೋಪಿಗಳ ಹುಡುಕಾಟಕ್ಕಾಗಿ ಬಳಿಕ ಮಂಡ್ಯ ಎಸ್‌ಪಿ ಯತೀಶ್, ಮದ್ದೂರು ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ೮ ಮಂದಿಯ ತಂಡವನ್ನು ರಚನೆ ಮಾಡಲಾಗುತ್ತೆ. ಆರೋಪಿಗಳ ಶೋಧಕ್ಕಿಳಿದ ಪೊಲೀಸರ ತಂಡಕ್ಕೆ ಎಟಿಎಂ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸ್ವಿಫ್ಟ್ ಕಾರೊಂದು ತುಂಬಾ ಹೊತ್ತಿನಿಂದ ನಿಂತಿರೋದು ಕಾಣುತ್ತೆ.. ಇದನ್ನು ಚೆಕ್ ಮಾಡಿದಾಗ ಈ ಕಾರು ಮದ್ದೂರಿನ ಎಳನೀರು ಮಾರ್ಕೆಟ್‌ನ ಹಿಂದಿನ ಬಡಾವಣೆಗೆ ಹೋಗುತ್ತೆ.. ಬಳಿಕ ಕಾರು ಇತ್ತಿದ್ದ ಮನೆ ಬಳಿ ವಿಚಾರಿಸಿದಾಗ ಎಳನೀರು ವ್ಯಾಪಾರ ಮಾಡಲು ಬಂದಿ ಮನೆ ಬಾಡಿಗೆ ಪಡೆದಿದ್ದು ಗೊತ್ತಾಗುತ್ತೆ.. ಆದ್ರೀಗ ಖಾಲಿ ಮಾಡಿದ್ರು ಅಂತಾನು ಗೊತ್ತಾಗುತ್ತೆ.. ೨ ಬಾರಿ ಕ್ಯಾಶ್.. ಮತ್ತೊಂದು ಬಾರಿ ಗೂಗಲ್ ಪೇನಲ್ಲಿ ಬಾಡಿಗೆ ಕೊಟ್ಟಿದ್ದ ಬಗ್ಗೆ ಮನೆ ಮಾಲೀಕ ಪೊಲೀಸರಿಗೆ ತಿಳಿಸ್ತಾರೆ.. ಇದರ ಜಾಡು ಹಿಡಿದ ಪೊಲೀಸರು ಗೂಗಲ್ ಪೇ ನಂಬರ್, ಬ್ಯಾಂಕ್ ಡಿಟೇಲ್ಸ್ ಚೆಕ್ ಮಾಡಿದಾಗ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆ ಶಿವಪುರಿ ಗ್ರಾಮದ ದೀಪಕ್ ಕುಮಾರ್ ಅನ್ನೋದು ಗೊತ್ತಾಗುತ್ತೆ.. ಬಳಿಕ ಇಡೀ ತಂಡ ಶಿವಪುರಿಗೆ ಹೋಗಿ ದೀಪಕ್ ಕುಮಾರ್‌ನನ್ನು ಬಂಧಿಸುತ್ತೆ.. ಬಳಿಕ ಎಳನೀರು ವ್ಯಾಪಾರ ನಷ್ಟವಾಗಿದ್ದಕ್ಕೆ ನಾಲ್ವರು ಸೇರಿ ಹೀಗೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಲ್ಲಿ ಇಬ್ಬರು ಯುಪಿಯುವರು.. ಇನ್ನಿಬ್ಬರು ಹರಿಯಾಣದವರು.. ಆದರೆ ಬಂಧಿತ ಆರೋಪಿಯಿಂದ ಯಾವುದೇ ರಿಕವರಿ ಮಾಡಿಲ್ಲ.<br /><br />#publictv #mandya

Buy Now on CodeCanyon